Friday, October 28, 2016

ಧರೆಗಿಳುದು ಬಾ....

ಬಾನೆತ್ತರದಲಿ ಕವಿದ ಕಾರ್ಮೋಡ
ಕಾಯುತಲಿದೆ ತಂಪಾಗಿಸಲು ಈ ಧರೆಯ
ದಿನಗಳೆಷ್ಟು ಕಳೆದರೂ ಹರ್ಷಕೆ ಉಳಿಯಲಾರೆ ನಾ ದೂರ
ಇಳಿದು ಬಾ ಧರೆಗೆ ನೀ ಬೇಗನೆ ತಣ್ಣಗಾಗಿಸು ಮನದ ಬೇಗೆಯ ಭರಪೂರ

ದಿನಗಳು ಕ್ಷಣದಂತೆ ಉರುಳುತಿರಲು
ನಿನ್ನ ದರುಶನಕೆ ನಾ ಕಾಯುತಿರಲು
ಏತಕೀ ಬಿಂಕ ಏತಕೀ ಬಿನ್ನಾಣ ನಿನ್ನಲಿ
ವರ್ಷರಾಜನೇ  ಇಳಿದು ಬಾ ಇಲ್ಲಿ ನೀಗಿಸು ಬಾ ಇಂದು ನನ್ನ ಮನದಾಸೆಯ
ಈ ವರ್ಷಧಾರೆಯಲೇ ಇಹುದು ನನ್ನ ಪ್ರೀತಿ
ಮಳೆಯ ಹನಿಯಲೇ ಕರಗಬೇಕು ನನ್ನ ಭೀತಿ
ಇಳಿದು ಬಾ ಧರೆಗೆ ನೀ ಬೇಗನೆ ಸೊಂಪಾಗಿಸು ಕಾಣದ ಪ್ರೀತಿಯ ಭರಪೂರ

ಕಾಣುತಲಿದೆ ಹೊಸ ಚಿಗುರೊಂದು ನನ್ನ ಕಂಗಳಲಿ
ಮೊಳೆಯುತಿದೆ ಹೂವೊಂದು ಈ ಮನಸಿನಲಿ
ಹಣ್ಣಾಗುತಲಿದೆ ಕಾಯೊಂದು ಈ ಭಾವದಲಿ
ಇಳಿದು ಬಾ ಧರೆಗೆ ನೀ ಬೇಗನೆ ನನಸಾಗಿಸು ಕಾಣದ ಕನಸನು ಭರಪೂರ 

Thursday, October 27, 2016

ಜೀವನ -- ಇಂದೋ ನಾಳೆಯೋ?

ಒಂದು ಕಡೆ ಜೀವನವೇ ಸಾಕೆನಿಸುವಷ್ಟು ನಿರ್ಲಪ್ತತೆ ನೀಡುವ IT ಜೀವನ. ಮತ್ತೊಂದೆಡೆ ಮನಸ್ಸಿನಲ್ಲೇ ಮನೆ ಮಾಡಿರುವ ನನ್ನಾಕೆಯ ಜೊತೆಗಿನ ಸ್ಪಂದನ. ಹಾಗೆ ಇನ್ನೊಂದೆಡೆ ಇಹ ಲೋಕವನ್ನೇ ಮರೆಸುವಂಥ ಮಗಳ ಕಂಗಳ ಆಕರ್ಷಣ. ಹೀಗೆ confusion ಇಂದ ಕೂಡಿದ ನನ್ನ ಲೈಫಿನಲ್ಲಿ ದಿನಗಳು ಉರುಳಿತ್ತಿದ್ದವು. ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಒಂದು ಯೋಚನೆ ಈ ಬುರುಡೆಯಲ್ಲಿ ಶುರುವಾಯಿತು. ಇಷ್ಟೆಲ್ಲಾ ದುಡ್ಡು ಸಂಪಾದಿಸುತ್ತಿದ್ದೇನೆ ಯಾವುದಕ್ಕಾಗಿ??  ಆಲೋಚನೆ ಮನಸಿನಾಳದಿಂದ ಎದೆಗೆ ಚುಚ್ಚಿತು.
ಮನೆಯವರಿಗೆ ಬೇಕಾದಾಗ ಆಫೀಸ್ ಇಂದ ರಜೆ ಸಿಗುವುದಿಲ್ಲ. ಹಬ್ಬ ಹರಿದಿನಗಳು ಎಂಬ ಮಾತೆ ಮರೆತು ಹೋಗಿದೆ. ಎಲ್ಲ ದಿನಗಳಲ್ಲೂ ಕೆಲಸ ಕೆಲಸ ಕೆಲಸ ಎಂದು ಆಫೀಸಿಗೆ ಅಳೆಯುತ್ತಿರುತ್ತೇನೆ. ದಿನದ 10 ತಾಸಿನ ಕೆಲಸಕ್ಕಾಗಿ ಸರಿಸುಮಾರು ೪ ತಾಸು ಕಾರಿನಲ್ಲಿ ಓಡಾಡುತ್ತೇನೆ. ಮನೆಯವರೊಂದಿಗೆ ಸುಖವಾಗಿ ಎರಡು ಕ್ಷಣ ಕಾಲ ಕಳೆಯುತ್ತಿದ್ದಂತೆ ಶುರು ಆಗುತ್ತದೆ ಆ ಮೊಬೈಲ್  ರಿಂಗ್ ಟೋನ್. ನೋಡುತ್ತಿದ್ದ ಹಾಗೆ ಆಫೀಸಿನಿಂದ ಒಂದು ಕರೆ ಬಂದಿರುತ್ತದೆ. ಯಾವುದೋ ತಿಳಿಯದ ಊರಿನಲ್ಲಿರುವ serverನಲ್ಲಿ ಬಗೆಹರಿಸಲಾಗದಂಥ ಯಾವುದೋ ಒಂದು Error. ಹಾಗು ಹೀಗೂ google ಎಂಬ ಭ್ರಹ್ಮಾಸ್ತ್ರ ಬಳಸಿ ಯಾವುದೋ ಒಂದು ಸೊಲ್ಯೂಷನ್ ಹುಡುಕಿ ಅಬ್ಬಾ ಇನ್ನು ಕೆಲಸ ಮುಗಿಯಿತು ಎನ್ನುವ ಹೊತ್ತಿಗೆ ಮತ್ತೆ ಶುರುವಾಗುತ್ತದೆ ಮೊಬೈಲಿನ ರಿಂಗ್ ಟೋನ್. ತಲೆ ಕೆಡಿಸಿಕೊಂಡು ಕೆಲಸ ಮಾಡಿದರಷ್ಟೇ ಸಾಕಾಗುವುದಿಲ್ಲ ಈ ಜನರಿಗೆ. ಅದರ ಬಗ್ಗೆ time to time update ಬೇರೆ ಕೊಡಬೇಕು. ಬಂದಿರುವ bug fix ಮಾಡುವುದಕ್ಕೆ ಮುಂಚೆ ಸಾವಿರ ಜನರ ಹತ್ತಿರ approval ಬೇರೆ ತೆಗೆದುಕೊಳ್ಳಬೇಕು. ಎಲ್ಲೆಲ್ಲಿಗೋ ಕರೆ ಮಾಡಿ ಬೇಕಾದಂಥ approval ತೆಗೆದುಕೊಂಡು ಆದಂತಹ bugಗೆ ಒಂದು fix ಹುಡುಕಿ ಅದನ್ನು implement ಮಾಡುತ್ತಿದ್ದ ಹಾಗೆ ಮತ್ತೊಂದು ಭೂತ ತಲೆಗೇರುತ್ತದೆ. Managementಗೆ ಕೊಡಬೇಕಾದ Root Cause Analysis. ಈ IT ಜೀವನವೇ ಹೀಗೆ ತೊಂದರೆ ಬಂದರೆ ಅದಕ್ಕೊಂದು ಪರಿಹಾರವನ್ನು ಕೊಟ್ಟರೆ ಸಾಕಾಗುವುದಿಲ್ಲ. ಆ ತೊಂದರೆ ಮತ್ತೆ ಬರದಂತೆ ಒಂದು ಮುಂದಾಲೋಚನೆಯ ಡಾಕ್ಯುಮೆಂಟ್ ಬೇರೆ ಕೊಡಬೇಕು. ದೂರಾಲೋಚನೆ ಎಲ್ಲದರಲ್ಲೂ ಇರುವುದು ಒಳ್ಳೆಯದೇ. ಆದರೆ ಈ ದೂರಾಲೋಚನೆ ಎಂಬುದು IT ಸಾಮ್ರಾಜ್ಯದ ದುರಾಲೋಚನೆಯು ಆಗಿ ಪರಿವರ್ತನೆಗೊಂಡು ಬಿಟ್ಟಿದೆ.

ಇಂತಹ ಅರ್ಥವಿಲ್ಲದ ಜಗತ್ತಿನಲ್ಲಿ ಕೆಲಸ ಮಾಡುತ್ತಾ ನನ್ನತನವೆಂಬುದನ್ನೇ ಮರೆತೇನಾ ಎಂಬ ಚಿಂತೆ ಕಾಡತೊಡಗಿದೆ. ಒಳ್ಳೆಯ ಭವಿಷ್ಯ ಸಿಗಲಿ ಎಂದು ಸೇರಿದ ಕೆಲಸವೇ ನನಗೆ ಇಂದು ನನ್ನ ವರ್ತಮಾನದ ವೈರಿಯಾಗಿಬಿಟ್ಟಿದೆ.  ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಳ್ಳಲು ಮುಂದಾಗಿ ಇಂದಿನ ಸಂತಸವನ್ನೇ ಮರೆತು ಬಿಟ್ಟೆ ನಾನು. ಜಗತ್ತಿನ ಅತಿ ಶ್ರೇಷ್ಠವಾದ ನಟರಲ್ಲಿ ಒಬ್ಬನಾದ ಚಾರ್ಲಿ ಚಾಪ್ಲಿನ್ ಹೇಳಿದ ಮಾತೊಂದು ಈ ದಿನ ನೆನಪಾಗುತ್ತಿದೆ “To truly laugh you must first take your pain and play with it”. ಯಾವ ಕಾರಣಕ್ಕಾಗಿ ಆತ ಅಂದು ಹಾಗೆ ಹೇಳಿದನೋ ನನಗೆ ತಿಳಿದಿಲ್ಲ. ಆದರೆ ಆತ ಹೇಳಿದ ಪ್ರತಿಯೊಂದು ಶಬ್ದವು ಸಹ ಸತ್ಯವೆನಿಸುತ್ತಿದೆ. ತನ್ನ ಕಷ್ಟಗಳೆಷ್ಟೇ ಇರಲಿ ಕಷ್ಟಗಳನ್ನುತೆಗೆದುಕೊಂಡು ಅದರೊಂದಿಗೆ ಆಟವಾಡಿದರಷ್ಟೇ ಕಷ್ಟಗಳು ದೂರವಾಗುತ್ತವೆಂಬ ಮಾತು ಬಹಳ ಇಷ್ಟವಾಯಿತು.

ನಾಳಿನ ತಿಳಿಯದ ಭವಿಷ್ಯಕ್ಕೆಂದು ದುಡಿದದ್ದು ಸಾಕು, ಇನ್ನೇನಿದ್ದರೂ ಬಾಳುವುದು ಇಂದಿಗೆ ಎಂದು ಮನಸ್ಸು ಮಾಡಿದ್ದೇನೆ. ಹೇಗಿದ್ದರೂ ಬೇಕಾಗಿರುವುದಕ್ಕಿಂತ ಕೊಂಚ ಹೆಚ್ಚಾಗಿಯೇ ಸಂಬಳ ದೊರೆಯುತ್ತಿದೆ. ವರ್ಷಕ್ಕೆ ಒಂದೆರಡು ಲಕ್ಷ savings ಮಾಡಿದರು ಸಾಕು ಭವಿಷ್ಯವೆಂಬುದು ಸುಭದ್ರವಾಗುತ್ತದೆ. ಮಗಳಿಗಾಗಿ ಒಂದು, ನಮಗಾಗಿ ಒಂದೆರಡು ಲಕ್ಷದ life insurance ಮಾಡಿಸಿದ್ದಾಗಿದೆ. ಉಳಿಯಲು ಒಂದು ಸೂರು ಕಟ್ಟಿದ್ದಾಗಿದೆ. ಎರಡು ಮನೆಗಳನ್ನು ಬಾಡಿಗೆಗೂ ಸಹ ನೀಡಿದ್ದೇನೆ. ಅಲ್ಪತೃಪ್ತನಾಗೇ ಉಳಿದು ಖುಷಿಯನ್ನು ಅನುಭವಿಸುವ ಎಂದು ನಿರ್ಧಾರ ತೆಗೆದುಕೊಂಡಿದ್ದೇನೆ. ಒಳ್ಳೆಯದೋ ಕೆಟ್ಟದೋ ಅದು ತಿಳಿಯುತ್ತಿಲ್ಲ. ತಿಳಿದುಕೊಳ್ಳುವ ಪ್ರಮೇಯವೂ ನನಗೆ ಉಳಿದಿಲ್ಲ. ಉಳಿದಿರುವ ಜೀವನವನ್ನು ಆರಾಮಾಗಿ ಖುಷಿಯಿಂದ ಹೆಂಡತಿ, ಮಗಳಿಗಾಗಿ ಮೀಸಲಿಟ್ಟು ಬಾಳೋಣ ಎಂಬ ತೀರ್ಮಾನ ನನ್ನದಾಗಿದೆ. ನಾಳಿನ ಮಾತು ನಾಳೆಗೆ. ಇಂದಿನ ಸಂತಸವಷ್ಟೇ ಇಂದಿಗೆ. ಇಂದಿನ ಖುಷಿಯೇ ನಾಳಿನ ಖುಷಿಗೆ ನಾಂದಿ ಎಂದೆನಿಸುತ್ತಿದೆ.


ನಿಮ್ಮ ಆಲೋಚನೆ ಅಭಿಲೋಚನೆಗಳನ್ನು ಶೇರ್ ಮಾಡಲು ಮರೆಯದಿರಿ!!!

Wednesday, October 26, 2016

ತನದ ಯಾನ....

ಎತ್ತಲೋ ಸಾಗುತಲಿದೆ ದೂರ ತೀರ ಯಾನ
ಭಾವ ಪರವಶದಲಿ ಕಳೆದು ಹೋಗಿದೆ ನನ್ನೀ ತನ
ಸಾಗರದಂಚಿನ ಅಲೆಯೊಂದು ಸೆಳೆಯುತಲಿದೆ ಈ ಮನದೊಡಲ ಆಸೆಯ
ಹೊರ ಹಾಕುತಲಿದೆ ಅನುರಾಗದ ಸ್ವರವಾದ ಕಂಬನಿಯ. 

Tuesday, September 27, 2016

ತರ್ಪಣ!!!

ಹೆಸರಲ್ಲೇನಿದೆ ಆಕೆಯದು ಎಲ್ಲವೂ ಅಪೂರ್ಣ
ನಾ ಬಯಸಿದೆ ಆಗಬೇಕೆಂದು ಆಕೆಯ ಜೀವದ ದರ್ಪಣ
ನನ್ನೀ ಜೀವನವ ಮಾಡಿದೆ ಆಕೆಯ ಖುಷಿಗೆ ಅರ್ಪಣ
ನಾನೇನ ಕೇಳದೆಯೇ ಕೊಟ್ಟಳಾಕೆ ನನ್ನ ಭಾವಕ್ಕೆ ತರ್ಪಣ