Monday, August 20, 2012

ಜಸ್ಟ್ ಟೈಮ್ ಪಾಸ್

ಎಲ್ಲ ಅರಿತು ಅರಿಯದಂತೆ ಹೋದೆ ನೀನು
ನನ್ನೀ ಬದುಕಿನಲಿ ಬೆಳಕಾಗಿದ್ದೆ ನೀನು 
ಪೂರ್ಣ ಚಂದ್ರನಂತೆ ಬೆಳಗುತಿರುವಾಗ ಜೀವನ 
ಬದುಕಿನಲಿ ತಿರುಗಿ ಬೆಳಕಾಗದಂತೆ ಮಾಡಿಟ್ಟೆ ನೀನು
ಇದೇನಾ ಪ್ರೀತಿ?? ಇದೇನಾ ಜೀವನ??

Saturday, August 4, 2012

ರಕ್ಷಾಬಂಧನ -- ಅಣ್ಣ ತಂಗಿಯ ಸಂಬಂಧದ ಪರಿಕಲ್ಪನೆ



ಶ್ರಾವಣ ಪೌರ್ಣಿಮೆ ದಿವಸ ಆಚರಿಸಲ್ಪಡುವ ಈ ಹಬ್ಬಕ್ಕೆ ಹೆಸರೇನೋ ಕೊಟ್ಟಿದಾರೆ ರಕ್ಷಾಬಂಧನ ಅಂತ. ಕೆಲವೊಬ್ಬರು ತಂಗಿ ತನ್ನ ಅಣ್ಣನ ರಕ್ಷೆಗಾಗಿ ಅವನ ಕೈಗೆ ರಾಖಿ ಕಟ್ಟುತ್ತಾಳೆ ಅದರ ಜೊತೆಗೆ  ನನ್ನನ್ನು ಕೆಟ್ಟದ್ದರಿಂದ ರಕ್ಷಿಸು ಅಂತ ಕೇಳಿಕೊಳ್ಳುತ್ತಾಳೆ. ಆ ರಾಖಿ ಕಟ್ಟಿಕೊಂಡಾಕ್ಷಣದಿಂದ ತನ್ನ ತಂಗಿಗೆ ರಕ್ಷಣೆ ಕೊಡ್ತೀನಿ ಅಂತ ಸಂಕಲ್ಪ ತೊಡ್ತಾನೆ ಅಣ್ಣ.
ನಾವು ಹಿಂದಿನಿಂದ ಕೇಳ್ತಾ ಬಂದಿರೋ ಪೌರಾಣಿಕ ಕಥೆಗಳನ್ನೇ ಮೆಲುಕು ಹಾಕಿದರೆ ಅಣ್ಣ ತಂಗಿಯ ಸಂಬಂಧ ಅನ್ನೋದು ಹೇಗಿರತ್ತೆ ಅನ್ನೋದಕ್ಕೆ ತುಂಬಾ ಉದಾಹರಣೆಗಳು ಸಿಗತ್ತೆ.

ಮೊದಲನೇ ಉದಾಹರಣೆ ಸಿಗೋದೆ ಕೃಷ್ಣ -- ದ್ರೌಪದಿ. ಪುರಾಣಗಳ ಪ್ರಕಾರ ಸಂಕ್ರಾಂತಿಯ ದಿನದಂದು ಕೃಷ್ಣ ತನ್ನ ಬೆರಳನ್ನು ಕೊಯ್ಕೊತಾನೆ. ಆ ದಿನ ರುಕ್ಮಿಣಿ ತನ್ನ ದಾಸಿಯನ್ನ ಬ್ಯಾಂಡೇಜ್ ತಗೊಂಡ್ ಬರಕ್ಕೆ ಕಳಿಸ್ತಾಳೆ. ಸತ್ಯಭಾಮ ತಾನೇ ಬ್ಯಾಂಡೇಜ್ ತರೋದಕ್ಕೆ ಓಡ್ತಾಳೆ. ಇದನ್ನೆಲ್ಲಾ ನೋಡ್ತಾ ನಿಂತಿದ್ದ ದ್ರೌಪದಿ ತನ್ನ ಸೀರೆಯನ್ನೇ ಹರಿದು ಕೃಷ್ಣನಿಗೆ ಬ್ಯಾಂಡೇಜ್ ಕಟ್ಟುತ್ತಾಳೆ. ಈ ಕೆಲಸಕ್ಕಾಗಿ ಕೃಷ್ಣ ದ್ರೌಪದಿಗೆ ನಿನ್ನ ಅಣ್ಣನಾಗಿ ನಾನು ನಿನ್ನನ್ನು ಕಾಪಾಡ್ತೀನಿ ಅಂತ ಭಾಷೆ ಕೊಡ್ತಾನೆ. ಹಾಗೆಯೇ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಾಗ ತನ್ನ ಮಾಯಾ ಶಕ್ತಿಯಿಂದ ದ್ರೌಪದಿಯ ಮಾನ ಕಾಪಾಡುತ್ತಾನೆ.

ಮತ್ತೊಂದು ಐತಿಹಾಸಿಕ ಕಥೆಗಳನ್ನ ಮೆಲುಕು ಹಾಕ್ತ ಹೋದರೆ ನಮಗೆ ಸಿಗುವುದು ರಾಣಿ ಕರ್ಣವತಿ ಮತ್ತು ಹುಮಾಯೂನ್ ಕಥೆ. ಮೇವಾರದ ರಾಣಿಯಾಗಿದ್ದ  ಕರ್ಣವತಿ ತನ್ನ ಪತಿ ರಾಣ ಸಂಗನ ಸಾವಿನ ನಂತರ ಮೇವಾರದ ಗದ್ದುಗೆ ಏರಿದ್ದಳು. ಆಕೆ ತನ್ನ ಹಿರೇ ಮಗನಾದ ವಿಕ್ರಮಾಜೀತನ ಹೆಸರಿನಲ್ಲಿ ತನ್ನ ಮೇವಾರದ ಜನರನ್ನ ನೋಡಿಕೊಳ್ಳುತ್ತಿದ್ದಳು. ಗುಜರಾತಿನ ಅರಸನಾಗಿದ್ದ ಬಹಾದೂರ್ ಶಾಹ್ ಮೇವಾರದ ಮೇಲೆ ಎರಡನೇ ಬಾರಿ ದಂಡೆತ್ತಿ ಬಂದಾಗ ರಾಣಿ ಕರ್ಣವತಿ ಉಳಿದ ಎಲ್ಲ ಅರಸರನ್ನು ಸಹಾಯಕ್ಕಾಗಿ ಕೋರಿದಳು. ಮೊದಮೊದಲು ಎಲ್ಲ ಅರಸರು ಸಹಾಯ ಮಾಡ್ತಿವಿ ಅಂತ ಹೇಳಿ ಕೊನೆಗೆ ಎಲ್ಲರು ಕೈ ಕೊಟ್ಟರು. ಆ ಸಂದರ್ಭದಲ್ಲಿ ರಾಣಿ ತನ್ನ ಪಾರಿವಾಳದ ಮೂಲಕ ಮೊಘಲ್ ರಾಜನಾಗಿದ್ದ ಹುಮಾಯೂನನಿಗೆ ಸಹಾಯ ಕೋರುತ್ತ ಒಂದು ಪತ್ರ ಬರೆದಳು. ಆ ಪತ್ರದ ಜೊತೆಗೆ ಒಂದು ರಾಖಿಯನ್ನು ಕಳಿಸಿದ್ದಳು.

ಈ ಪತ್ರ ಹುಮಾಯೂನನಿಗೆ ತಲುಪುವುದಕ್ಕೂ ಮೊದಲು ಮೊಘಲ್ ಸಾಮ್ರಾಟ ಮತ್ತೊಂದು ಯುಧ್ಧಕ್ಕೆ ತನ್ನ ಸೇನೆಯನ್ನ ಕಳಿಸಿದ್ದ. ಈ ಪತ್ರ ದೊರಕುತ್ತಲೇ ಆ ಸೇನೆಯನ್ನು ಮೇವಾರದ ಕಡೆಗೆ ಕಳುಹಿಸಿದ. ಈ ಸೇನೆ ಮೆವಾರಕ್ಕೆ ತಲುಪುವ ಮೊದಲೇ ರಜಪೂತರ ಸೇನೆ ಚಿತ್ತೂರಿನಲ್ಲಿ ಸೋಲನ್ನು ಒಪ್ಪಿಕೊಂಡಿತ್ತು.  ಬಹಾದೂರ್ ಶಾಹ್ ಎದುರಿಗೆ ತನ್ನ ರಾಜ್ಯಕ್ಕಾಗಿ ಬೇಡುವುದಕ್ಕಿಂತ ಸಾವೇ ಲೇಸು ಎಂದು ರಾಣಿ ಕರ್ಣವತಿ ತನ್ನ ಪ್ರಾಣವನ್ನು ತಾನೇ ತೆಗೆದು ಕೊಂಡಿದ್ದಳು. ನಂತರ ಮೊಘಲ್ ಸೇನೆ ಬಹಾದೂರ್ ಶಾಹ್ ಒಡನೆ ಯುಧ್ಧವಾಡಿ ಮೇವಾರದ ಗದ್ದುಗೆಯನ್ನು ತಿರುಗಿ ವಿಕ್ರಮಾಜೀತನಿಗೆ ನೀಡಿದರು.

ಇದೇ ರೀತಿ ಯಮ ಹಾಗೂ ಯಮುನಾ, ಗಣಪತಿ ಮತ್ತು ಮಾನಸ, ಲಕ್ಷ್ಮಿ ಹಾಗೂ ಬಾಲಿ ಹೀಗೆ ಸಾವಿರಾರು ಕಥೆಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ತರಹದ ಸಂಸ್ಕೃತಿ ಇರುವಂಥ ನಾಡಿನಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ ಅಲ್ವ???
ಸುಮ್ಮನೆ ಒಬ್ಬ ಅಣ್ಣನಾಗಿ ರಾಖಿ ಕಟ್ಟಿಸಿಕೊಂಡು ತಂಗಿಗೆ ಉಡುಗೊರೆಯಾಗಿ ಏನನ್ನೋ ಕೊಟ್ಟರೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ರಾಖಿ ಹಬ್ಬದ ಹಿಂದಿನ ಭಾವನೆಗಳನ್ನ ಅರ್ಥ ಮಾಡಿಕೊಂಡು ನಾವು ಅದರಂತೆ ನಡೆದು ಕೊಂಡರೆ ಸಾಕು. ಈ ಅಣ್ಣ ತಂಗಿಯ ಸಂಬಂಧ ಹಿಂದಿನಂತೆಯೇ ಇರಲಿ. ಬಾಂಧವ್ಯತೆ ಎಲ್ಲರಲ್ಲೂ ಬೆಳಿಯಲಿ ಅಂತ ಆಶಿಸುತ್ತೇನೆ.

ಎಲ್ಲ ಅಣ್ಣ ತಮ್ಮಂದಿರಿಗು, ಅಕ್ಕ ತಂಗಿಯರಿಗೂ ರಕ್ಷಾಬಂಧನದ ಶುಭಾಶಯಗಳು

Tuesday, July 17, 2012

ಬಾಲ್ಯದ ಆ ದಿನಗಳ ನೆನಪು

ಬಾಲ್ಯದ ಆ ಖುಷಿಯಾದ ದಿನಗಳ ಮರೆಯಲು ಸಾಧ್ಯವೇ????

ನಮ್ಮ ಭವಿಷ್ಯದ ಚಿಂತೆಯಿಲ್ಲದೆ ಕಳೆದ ಆ ದಿನಗಳು. ರೋಡ್ ಮಧ್ಯದಲ್ಲೇ ಒಂದೆರಡು ಕಲ್ಲುಗಳ ಇಟ್ಟು ಆಡಿದ ಕ್ರಿಕೆಟ್. ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಆಡುತ್ತಿದ್ದ ಆಟಗಳು. ಮನೆ ಹತ್ತಿರದ ಹುಡುಗರ ಜೊತೆ ಆಡಿದ ಗಿಲ್ಲಿ ದಾಂಡು, ಗೋಲಿ, ಬುಗುರಿ ಆಟಗಳು. ಶಾಲೆಯಲ್ಲಿ ಟೀಚರಿಂದ ತಿಂದ ಆ ಏಟುಗಳು. ಶಾಲೆಯಲ್ಲಿ ಕ್ಲಾಸಿನ ಹೊರಗೆ ನಿಂತು ಮಾಡುತ್ತಿದ್ದ ಚೇಷ್ಟೆಗಳು, ಹುಟ್ಟಿದ ಹಬ್ಬದ ದಿನ ಕ್ಲಾಸಿನ ಎಲ್ಲ ಹುಡುಗ ಹುಡುಗಿಯರಿಗೂ ಕೊಡ್ತಾ ಇದ್ದ ಆ ೫೦ ಪೈಸೆ ಚಾಕಲೇಟ್ ಗಳು, ಬುಕ್ಕಿನ ಹಿಂದಿನ ಪುಟದಲ್ಲಿ ಬರೆಯುತ್ತಿದ್ದ ಆ ಕಾರ್ಟೂನ್ ಗಳು, ಅಪ್ಪ ಅಮ್ಮನ ಜೊತೆ ಓದದೆ ಇರೋದಕ್ಕೆ ಮಾಡುತ್ತಿದ್ದ ಕೋಳಿ ಜಗಳಗಳು, ಬುಧವಾರ ಒಂದೇ ದಿನ ಹಾಕುತ್ತಿದ್ದ ಆ ಕಲರ್ ಡ್ರೆಸ್ ಗಳು, ಅಕ್ಟೋಬರ್ ತಿಂಗಳಲ್ಲಿ ಬರುತ್ತಿದ್ದ ಚಳಿಗಾಲದ ರಜೆ, ಏಪ್ರಿಲ್ ಮೇ ತಿಂಗಳಿಗೆ ಕೊಡ್ತಾ ಇದ್ದ ಸಮ್ಮರ್ ಹಾಲಿಡೇಸ್, ಆ ರಜದಲ್ಲಿ ಮಾಡುತ್ತಿದ್ದ ಮಂಗಾಟಗಳು, ಅಜ್ಜಿ ಮಾಡಿ ಕೊಡ್ತಾ ಇದ್ದ ಸಿಹಿ ತಿಂಡಿಗಳು. ಅಜ್ಜಿ ಮನೆಗೆ ಹೋಗೋದೇ ಒಂದು ದೊಡ್ಡ ಸಂಭ್ರಮ ಆಗಿತ್ತು ಅಲ್ವ ನಮಗೆಲ್ಲರಿಗೂ.

ಸ್ನೇಹಿತರೊಂದಿಗೆ ಕೂತು ಮಾಡುತ್ತಿದ್ದ ಗ್ರೂಪ್ ಸ್ಟಡಿಗಳು, ಪರೀಕ್ಷೆ ಹಿಂದಿನ ದಿನದ ಭಯ, ಆ ಭಯದಿಂದ ಬಾರದ ನಿದ್ದೆಗಳು, ಪರೀಕ್ಷೆಯ ಟೈಮಲ್ಲಿ ಮಾಡುತ್ತಿದ್ದ ಕುಚೇಷ್ಟೆಗಳು, ಪಕ್ಕದವರು ಎಷ್ಟು ಬರಿತ ಇದ್ದಾರೆ ಅನ್ನೋ ಕುತೂಹಲಗಳು, ರಿಸಲ್ಟ್ ಬಂದಾಗ ಇಂಟರೆಸ್ಟ್ ಇಟ್ಕೊಂಡು ನೋಡ್ತಾ ಇದ್ದ ಎಲ್ಲರ ಮಾರ್ಕ್ಸ್ ಶೀಟುಗಳು. ವರ್ಷದಲ್ಲಿ ನೋಡುತ್ತಿದ್ದ ಒಂದೋ ಎರಡೋ ಮಕ್ಕಳ ಸಿನಿಮಾಗಳು, ದೂರದರ್ಶನದಲ್ಲಿ ಬರುತ್ತಿದ್ದ mickey mouse, ಚಿತ್ರಹಾರ್, ಚಿತ್ರಮಂಜರಿ ಹಾಗು ರಂಗೋಲಿ ಪ್ರೊಗ್ರಾಮ್ ಗಳು. ಇದ್ದಿದ್ದು ಒಂದೇ ಒಂದು ಚಾನೆಲ್ ಆದರು ನಾವು ಆರಾಮಾಗೆ ಇದ್ದಾಗಿತ್ತು. ಎಲ್ಲಿ ಹೋಯ್ತು ಆ ಮುಘ್ದತೆ?? ಆ ಸಂತೋಷ?? ಆ ದಿನಗಳು?? ಆ ಖುಷಿ??

 ಆ ದಿನಗಳು ಮತ್ತೆ ಮರಳಿ ಬರುವುದೇ ನಮಗೆ??? ಆ ದಿನಗಳಲ್ಲಿ ನಮ್ಮಲ್ಲಿದ್ದ ಮುಘ್ದತೆ ಆದರು ನಮಗೆ ತಿರುಗಿ ಬರುವುದೇ??? ಬೇಕೆಂದು ಎಷ್ಟೇ ಬೇಡಿದರು ನಮಗೆ ಆ ದಿನಗಳು ಮರಳಿ ಬರುವುದಿಲ್ಲ ಆ ದಿನಗಳೆಲ್ಲ ಕಳೆದು ಹೋಗಿದೆ ಎಂದು ಪರಿತಪಿಸುತ್ತಾ ಬಾಳಬೇಕಾಗಿದೆ ಅಲ್ವ ಮುಂದಿನ ದಿನಗಳನ್ನ??? ಮುಂದಿನ ದಿನದಲ್ಲಿ ಈ ರೀತಿಯ ಸಂತೋಷದ ದಿನಗಳಂತೂ ನಮಗೆ ತಿರುಗಿ ಬರುವುದಿಲ್ಲ ಅನ್ನೋದು ಒಂದು ಕಹಿ ಸತ್ಯ ಆದರು ಸಹ ಭವಿಷ್ಯ ಎಂಬ ಕತ್ತಲೆ ಪ್ರಪಂಚದಲ್ಲಿ ಖುಷಿ ಇರಲಿ ಅಥವ ದುಃಖ ಇರಲಿ ಏನೋ ಒಂದಂತು ಇದೆ ಎಂಬುದನ್ನ ಅರ್ಥೈಸಿಕೊಂಡು ನಮ್ಮ ಜೀವನ ನಡೆಸಬೇಕಾಗಿದೆ. ನಡೆಸುವ. Fast forward ಎಂಬ option ಇದ್ದಿದ್ರೆ ಚೆನ್ನಾಗಿರ್ತಿತ್ತು ಅಲ್ವ????

ಕನಸಿನ ಜೀವನ ಮನಸ್ಸಿಗೆ ಬಾಧೆ!!!

ಈ ದಿನ ನನಗೆ ಒಂದು ರೀತಿ ಒಳ್ಳೇದು ಆಗಿದೆ ಒಂದು ರೀತಿ ಕೆಟ್ಟದ್ದು ಆಗಿದೆ. ಒಳ್ಳೇದು ಹೇಗೆಂದರೆ ಬೆಳಗ್ಗೆ ಸುಮಾರು ೯ ಗಂಟೆ ಇಂದ ಸಂಜೆ ೭ ಗಂಟೆ ವರೆಗೆ ಬಿಡುವಿಲ್ಲದ ನಿದ್ರೆ... ಕೆಟ್ಟದಾಗಿರೋದು ಒಂದೇ ಒಂದು ಕಡೆ ನನ್ನ ನೈಟ್ ಶಿಫ್ಟ್ ಇಂದ. ಸಂಜೆ ಏಳುತ್ತಿದ್ದಂತೆಯೇ ಏನೋ ಒಂದು ರೀತಿಯ ಆಲಸ್ಯ. ಪ್ರತಿ ದಿನ ಇದ್ದ ಹಾಗೆ ಈ ದಿನ ಇಲ್ಲ. ಏನನ್ನೋ ಕಳೆದು ಕೊಂಡಿದ್ದೇನೆ ಅನ್ನೋ ಕಲ್ಪನೆ. ಮನಸ್ಸಿನಲ್ಲಿ ಒಂದು ರೀತಿಯ ದುಗುಡ.

ಬೆಳಗ್ಗೆ ಮಲಗಕ್ಕು ಮೊದಲು ಜ್ವರಕ್ಕೆ ಔಷಧಿ ತೆಗೆದುಕೊಂಡೇ ಮಲಗಿದ್ದೆ. ಹಾಗಾಗಿ ಸುಮಾರು ಹತ್ತು ತಾಸು ನಿದ್ದೆ ಮಾಡಿದ್ದೇನೆ ಇಂದು. ನಿನ್ನೆಯಿಂದ ಕಾಡುತ್ತಿದ್ದ ಜ್ವರ ಈಗಿಲ್ಲ. ಹಳೆಯ ಕಹಿಯಾದ ನೆನಪುಗಳು ಕಾಡುತ್ತಿಲ್ಲ. ಮುಂದೆ ನನ್ನ ಭವಿಷ್ಯದಲ್ಲಿ ಸಿಹಿಯಾದ ದಿನಗಳು ಬರಬಹುದೇನೋ ಎಂಬ ಆಸೆಯು ನನ್ನಲ್ಲಿ ಬರುತ್ತಾ ಇಲ್ಲ. ಮನಸ್ಸಿನಲ್ಲೇ ಒಂದು ರೀತಿಯ ಹೊಡೆದಾಟ. ನನ್ನ ಒಂದೇ ಒಂದು ಮನಸ್ಸೇ ಹಿಸೆ ತೆಗೆದುಕೊಂಡು ಬೇರೆಯಾದಂತಾಗಿದೆ. ನಿನ್ನೆಯ ಹಾಗೆ ಇವತ್ತಿಲ್ಲ ಗೊತ್ತಿದೆ, ನಾಳೆ ಹೇಗಿರತ್ತೆ ಅನ್ನೋ ಯೋಚನೇನು ನನಗಿಲ್ಲ, ಅದೂ ತಿಳಿದಿದೆ. ಆದರೂ ಯಾಕೆ ಈ ರೀತಿ ನನ್ನ ಮನಸ್ಸು ನನ್ನನ್ನೇ ಕಾಡುತ್ತಿದೆ.  ನಿದ್ದೆ ಜಾಸ್ತಿಯಾಗಿ ಹೀಗೆಲ್ಲ ಆಗ್ತಾ ಇದೆಯಾ ಅಥವಾ ಹಳೆಯದೆಲ್ಲ ಕಹಿಯಾದ ನೆನಪಾಗಿರುವುದರಿಂದನ ಅಥವಾ ನಾಳಿನ ಯೋಚನೆ ನಾ ಮಾಡದೆ ಇರುವುದರಿಂದನ??? ಕಾರಣವೇ ತಿಳಿಯದಾಗಿದೆ. ಮನಸ್ಸೇ ಹೀಗಾ?????

ಯಾರೋ ಪುಣ್ಯಾತ್ಮ ಹೇಳಿರೋದನ್ನ ಕೇಳಿದ್ದೆ "confusion is happiness" ಅಂತ. ಅದು ನಿಜನಾ??? ಕೆಟ್ಟದ್ದು ಒಳ್ಳೆಯದು, ಸಿಹಿ ಕಹಿ, ಗೊತ್ತಿರೋದು ಗೊತ್ತಿಲ್ದೆ ಇರೋದು ಇವೆಲ್ಲ ಹುಟ್ಟೋದು ಸಾಯೋದ್ರ ಮಧ್ಯೆ ಬೇಕಾ??? ಕನಸು ಕಟ್ಟುತ್ತಾ ಬದುಕಲು ನನಗೇಕೆ ಇಷ್ಟ ಆಗ್ತಾ ಇಲ್ಲ??? ಭವಿಷ್ಯ ಹೇಗಿರತ್ತೆ, ಹೇಗಿರಬೇಕು ಅನ್ನೋ ನಿರ್ಧಾರ ಇಂದಿಗೆ ನನ್ನಲ್ಲಿ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗ್ತಾ ಇಲ್ಲ??? ಎಲ್ಲ confusion; most probably ಇದೇ ನನ್ನ happiness ಅಲ್ಲವ????

ಇದನ್ನ ಓದಿ ನೀವು ಸಹ confuse ಆದ್ರ??? ಬರೆದು ತಿಳಿಸಿ ನಿಮ್ಮ ಅನಿಸಿಕೆಯನ್ನ

Monday, July 16, 2012

ಸ್ನೇಹಿತನ ಆಸರೆ ಬೇಕಾಗಿದೆ ಇಂದು


ಯಾಕೋ ಏನೋ ಗೊತ್ತಿಲ್ಲ... ಒಬ್ಬ ಫ್ರೆಂಡ್ ಜೊತೆಗೆ ಇದ್ದಿದ್ರೆ ಈ ಟೈಮ್ ಅಲ್ಲಿ ಚೆನ್ನಾಗಿರ್ತಿತ್ತು ಅನ್ನಿಸ್ತ ಇದೆ....

ಪೂರ್ತಿ ವೀಕೆಂಡ್ ಆರಾಮಾಗೆ ಟೈಮ್ ಪಾಸ್ ಆಯ್ತು... ಒಳ್ಳೆ ನಿದ್ದೇನು ಆಯ್ತು... ಫೆಸ್ ಬುಕ್ಕಲ್ಲಿ ಕುತ್ಕೊಂಡು ಸುಮಾರ್ ಪಟ್ಟಂಗ ಹೊಡೆದಿದ್ದು ಆಯ್ತು... ರಾತ್ರಿ ಒಂದು 5 ಫಿಲಂ ಕೂಡ ನೋಡಿದೀನಿ. ಎಲ್ಲ ಸರಿಯಾಗೆ ಇದೆ ಆದರು ಸಹ ಯಾರೋ ಜೊತೆಗಿಲ್ಲ ಅನ್ನೋ ಮನೋಭಾವ...

ಫ್ರೈಡೇ ನೈಟ್ ಶಿಫ್ಟ್ ಅಲ್ಲಿ ಇದ್ದಾಗ ಕಿರಣ ಕಾಲ್ ಮಾಡ್ದ. ಅವ್ನು ಹೊಸ ಕಾರ್ ಬೇರೆ ತಗೊಂಡಿದ್ದ. ಮಗ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ ಅನ್ಕೊಂಡಿದಿವಿ. ಫ್ರೀ ಇದ್ರೆ ಬರ್ತೀಯ ಅಂದ... ಅವನಿಗೆ ಡ್ರೈವಿಂಗ್ ಅಷ್ಟಾಗಿ ಬರಲ್ಲ ಅಂತ ನಂಗ್ ಗೊತ್ತಿತ್ತು. ಅದಕ್ಕೆ ಆಯ್ತು ಬರ್ತೀನಿ ಅಂದೇ... ಬೆಳಗ್ಗೆ ಹೇಳದೆ ಕೇಳ್ದೆ 7 ಗಂಟೆಗೆ ಶಿಫ್ಟ್ ಮುಗಿಯದಾದ್ರು 5 ಗಂಟೆಗೇ ಹೊರಟ್ ಬಿಟ್ಟೆ ಮನೆಗೆ... ಕೆಲ್ಸನು ಇರ್ಲಿಲ್ಲ ಸುಮ್ನೆ ಹೋಗಿ ಮಲ್ಕೊಂಡೆ...8 ಗಂಟೆ ಹೊತ್ತಿಗೆ ಮೊಬೈಲ್ ಇಂದ ಕರೆದರೂ ಕೇಳದೆ ಅನ್ನೋ ರಿಂಗ್ ಹೊಡ್ಕೊಳಕ್ಕೆ ಶುರು ಆಯ್ತು ನೋಡಿದ್ರೆ ಕಿರಣನ್ ಕಾಲ್ ಅದು... ಹಾಗೆ ಪಿಕ್ ಮಾಡಿ ಹೊರಡ್ತಾ ಇದೀನಿ ಅಂತ ಅವನಿಗೆ ಒಂದ್ ಸಣ್ಣ ಸುಳ್ಳು ಹೇಳಿ... ಬೇಗ ಬೇಗ ಸ್ನಾನ, ಸಂಧ್ಯಾವಂದನೆ, ಪೂಜೆ ಎಲ್ಲ ಮುಗ್ಸಿಟ್ಟು.. ಹೊಟ್ಟೆಗೆ ಒಂದ್ ಸ್ವಲ್ಪ ನೈವೇದ್ಯ ಮಾಡ್ಕೊಂಡು ಹೊರ್ಟೆ. ಅವ್ನ ಮನೆಗ್ ಹೋಗೋ ಹೊತ್ತಿಗೆ ಎಲ್ಲರು ರೆಡಿ ಆಗಿ ನಂಗೆ ಕಾಯ್ತಾ ಇದ್ರು. ಸೀದಾ ಅವ್ನ ಕಾರ್ ಎತ್ಕೊಂಡು ಹೊರಟ್ವಿ... ಗೊತ್ತೇ ಇದ್ಯಲ್ಲ ನಮ್ಮ ಬೆಂಗಳೂರಿನ ಟ್ರಾಫಿಕ್. ನನ್ ಒಬ್ಬ ಮ್ಯಾನೇಜರ್ ಮೊದ್ಲು ಹೇಳ್ತಾ ಇದ್ದ "In Bangalore traffic is always bad.. It can only get worse " ಅಂತ. ಹಾಗೆ ಆಯ್ತು ನಮ್ ಕಥೆನು  ಟ್ರಾಫಿಕ್ ಜಾಮ್!!!! ಯಾವ್ ರೋಡಿಗೆ ಹೋದರು ಟ್ರಾಫಿಕ್ ಜಾಮ್!!!!.

ಹಾಗು ಹೀಗೂ ತಳ್ಕೊಂಡ್ ತಳ್ಕೊಂಡ್ ವಿಜಯನಗರದಿಂದ  ಹೆಬ್ಬಾಳದ ತನಕ ಬಂದ್ ಮುಟ್ಟಿದ್ವಿ ಅಲ್ಲಿಂದ ಮುಂದೆ ಅಂತು ಒಳ್ಳೆ ಹೈವೆ ರೋಡ್ ದೊಡ್ಡಬಳ್ಳಾಪುರ ಯಾವಾಗ್ ಬಂತು ಅಂತಾನೆ ಗೊತ್ತಾಗ್ಲಿಲ್ಲ. ದೊಡ್ಡಬಳ್ಳಾಪುರದಲ್ಲಿ ಒಂದ್ ಸಣ್ಣ ಬ್ರೇಕ್ ತಗೊಂಡು ಮುಂದೆ ಹೊರಟ್ವಿ. ಘಾಟಿ ಸುಬ್ರಮಣ್ಯದಲ್ಲಿ ದೇವರ ಅಭಿಷೇಕ, ಪೂಜೆ, ದರ್ಶನ ಎಲ್ಲ ಮುಗ್ಸಿ ಹೊರಟ್ವಿ.. ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿ ಕಿರಣನ ರಿಲೇಟಿವ್ ಒಬ್ರ ಮನೆಗ್ ಹೋಗಿ ಒಂದು ಕಾಫೀ ಕುಡಿದು ಬೆಂಗಳೂರಿಗೆ ವಾಪಸ್ ಹೊರಟ್ವಿ. International airport ಇಂದ ಸ್ವಲ್ಪ ಮುಂದೆ ಬರ್ತಾ ಇದ್ದಹಾಗೆ ಎಲ್ಲಿದ್ರೋ ಗೊತ್ತಿಲ್ಲ interceptor ಅಲ್ಲಿ ನಮ್ ಕಾರ್ ಸ್ಪೀಡ್ 97 kmph ಇತ್ತು ಅನ್ಸತ್ತೆ. ನಮ್ಮನ್ನ ಹಿಡ್ಕೊಂಡ್ಬಿಟ್ರು. ಅಲ್ಲಿ ಲಿಮಿಟ್ ಇದ್ದಿದ್ದೆ 60 kmph ಅಂತೆ... ಯಾವ್ ಯಾವ್ದೋ 3 ಕೇಸ್ ಹಾಕಿ ಒಟ್ಟು 700 rs ಫೈನ್ ಬೇರೆ ತಗೊಂಡ್ರು. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ
700 rs ಫೈನ್ ಕಟ್ಟಿ ಅಲ್ಲಿಂದ ಹೊರಟ್ವಿ. ಹಾಗು ಹೀಗೂ ಬೆಂಗಳೂರಿಗೆ ಬಂದು ತಲಪಿ ಅವ್ರ ಮನೆ ಇಂದ ನಂ ಕಾರ್ ತಗೊಂಡು ವಾಪಸ್ ಮನೆಗ್ ಬಂದೆ.

ನೈಟ್ ಶಿಫ್ಟ್ ಬೇರೆ ಮಾಡಿದ್ದು ನಿದ್ದೆ ಇಲ್ದೆ ಲಾಂಗ್ ಡ್ರೈವ್ ಮಾಡಿದ್ದೂ ಎಲ್ಲ ಸೇರಿ ಹುಷಾರ್ ಇಲ್ದೆ ಹೋದಹಾಗ್ ಆಗಿತ್ತು ನಂಗೆ. ಮನೆಗ್ ಹೋದವನೆ ಹಿಂದೆ ಮುಂದೆ ಯೋಚನೆ ಮಾಡದೆ ಒಂದ್ ಚೂರು ಮೊಸರನ್ನ ತಿಂದಿದ್ದೆ ನನ್ ರೂಮಿಗ್ ಹೋಗಿ ಬಿದ್ಕೊಂಡೆ. 8 ಗಂಟೆಗೆಲ್ಲ ನಂಗೆ ಮಧ್ಯ ರಾತ್ರಿ ಆಗಿತ್ತು. ಬೆಳಗ್ಗೆ 8 ಗಂಟೆ ತನಕ ಯಾರು ಬಂದು ನನ್ನ ಡಿಸ್ಟರ್ಬ್ ಮಾಡ್ಲಿಲ್ಲ. ಒಳ್ಳೆ ನಿದ್ದೆ ಆಗಿತ್ತು. ಬೆಳಗ್ಗೆನೇ ಮಳೆ ಬೇರೆ ಹಿಡ್ಕೊಂದಿತ್ತು. ಭಾನುವಾರ ನನ್ ಫ್ರೆಂಡ್ಸ್ ಸಿಗ್ತಾರೆ ಒಂದ್ ಸ್ವಲ್ಪ ಟೈಮ್ ಪಾಸು ಆಗತ್ತೆ ಅಂತ ಎಲ್ಲ ಮನಸಲ್ಲಿ ಅಂದ್ಕೊಂಡು ಇದ್ದೆ. ಬರಿ ಅಂದ್ಕೊಂದಿದ್ದಷ್ಟೇ ಆಯ್ತು ಒಬ್ರು ಸಿಗ್ಲಿಲ್ಲ. ಒಂದಿಷ್ಟು ಮೂವಿಗಳನ್ನ ಡೌನ್ಲೋಡ್ ಮಾಡಿದ್ದೆ. ಅವನ್ನೆಲ್ಲ ನೋಡ್ಕೊಂಡು ಟೈಮ್ ಪಾಸು ಮಾಡಿದ್ದೆ ಬಂತು. ಜೊತೆಗೆ ಫೇಸ್ ಬುಕ್ಕಲ್ಲಿ ಯಾರಾದ್ರೂ ಇರ್ತಾರೆ ಅಂದ್ಕೊಂಡೆ.. ನೋಡಿರೆ ಕರೆಂಟ್ ಕೂಡ ಹೊರಟ್ ಹೋಯ್ತು ಅಷ್ಟರಲ್ಲಿ. ಪಾಪಿ ಸಾಯಕ್ಕೆ ಹೋದರು ಮೊಣಕಾಲುದ್ದ ನೀನು ಅಂದ ಹಾಗೆ ಆಗಿತ್ತು ನನ್ ಸ್ಥಿತಿ. ಮಧ್ಯಾನ  ಊಟ ಮುಗ್ಸಿ ಮತ್ತೆ ನಿದ್ದೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಅಮ್ಮ ಬಂದು ಎಬ್ಸಿದ್ರು ಏಳಕ್ಕೆ ಮನಸ್ಸಿಲ್ಲ. ಏಳಬೇಕಲ್ಲ ಅಂತ ಎದ್ದು ಒಂದ್ ಕಪ್ ಚಾ ಕುಡಿದು ಮತ್ತೆ ಕಂಪ್ಯೂಟರ್ ಹಿಡಿದು ಕೂತೆ. ಆಗ ಮನಸ್ಸಿಗೆ ಬಂದಿದ್ದು ಈ ಯೋಚನೆ "
ಒಬ್ಬ ಫ್ರೆಂಡ್ ಜೊತೆಗೆ ಇದ್ದಿದ್ರೆ ಈ ಟೈಮ್ ಅಲ್ಲಿ ಚೆನ್ನಾಗಿರ್ತಿತ್ತು" ಅಂತ. ನನ್ ಜನ್ಮಕ್ಕೆ ಒಬ್ಬ ನೆಟ್ಟಗಿರೋ ಫ್ರೆಂಡ್ ಕೂಡ ಸಿಗ್ಲಿಲ್ಲ ನಂಗೆ. ಎಲ್ಲ ಒಂದಲ್ಲ ಒಂದ್ ರೀತಿ ಹುಚ್ಚರೆ.

ಅದೇ ಟೈಮ್ಅಲ್ಲಿ ಒಂದು ಒಳ್ಳೆ ಯೋಚನೆ ಕೂಡ ನಂಗ್ ಬಂತು. ಯಾಕೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬಾರದು ಅಂತ.  ಈ ಯೋಚನೆಯ ಫಲವೇ ನನ್ನ ವಿನೂತನ. ಒಂದು ರೀತಿಲಿ ಹೇಳಬೇಕಂದ್ರೆ ಟೈಮ್ ಪಾಸು ಮಾಡೋಕೆ ಗೊತ್ತಾಗದೆ ಶುರುವಾದಂಥ ಒಂದು ಬ್ಲಾಗ್. ನನ್ನ ಮನಸ್ಸಿಗೆ ತೋಚಿದ್ದನ್ನ ಗೀಚ್ತೀನಿ ಇಲ್ಲಿ. ಓದೋದಕ್ಕಿಂತ ಒಳ್ಳೆ ಸ್ನೇಹಿತ ಯಾರು ಇಲ್ಲ ಅಂತ ಕೇಳಿದ್ದೆ. ಆದ್ರೆ ನಾನು ಬರೆಯೋದ್ರಲ್ಲೇ ನನ್ನ ಸ್ನೇಹಿತನ ಕಂಡು ಕೊಲ್ಲ್ತ ಇದೀನಿ. ಯಾರಿಗೂ ನೋವು ಅಥವಾ ಕಷ್ಟ ಕೊಡಕ್ಕೆ ಇಲ್ಲಿ ಏನನ್ನು ಬರಿಯಲ್ಲ. ನನ್ನ ಸುಖ ನನ್ನ ದುಖ ಎರಡನ್ನು ತೋಡ್ಕೊತೀನಿ. ಓದಿ.... ಹರಿಸಿ... ಬೆಳೆಸಿ. ನಿಮ್ಮೆಲರ ಆಶೀರ್ವಾದ ನನಗಿರಲಿ.
                                                                                                                                                                                                                                                                              ಇಂತಿ,
ವಿನೂತನದ ವಿನಯ 

Saturday, July 14, 2012

ಮನಸಿನ ಮಾತು

ಮನಸಿನ ಮಾತುಗಳ ಅರಿವವರಾರು 
ಮನದಾಳದ ಹಿಂಸೆಯ ಅರಿತವರಾರು
ಕಣ್ಣಲ್ಲಿ ನೀರಿಲ್ಲ ಎಂದರೆ ಸುಖವಾಗಿದ್ದೆನೆಂದು ಅರ್ಥವೇ 
ನಿನ್ನ ಜೊತೆ ಕಳೆದ ಆ ಪ್ರೀತಿಯ ದಿನಗಳ ಅಳಿಸುವವರಾರು 

ಮರೆತರು ನಿನ್ನ ನೆನಪು ಎಲ್ಲೋ ಒಂದು ಮುಳ್ಳಿನಂತೆಯೇ ಚುಚ್ಚುತಿದೆ ಈ ಹೃದಯವ 
ಆ ಮುಳ್ಳ ನನ್ನ ಜೀವನದಿ ಕಳೆಯುವವರಾರು 
ನಿನ್ನ ನಗುವೇ ನನ್ನ ಉಸಿರಾಗಿತ್ತು ನಿನ್ನ ಮನಸೇ ನನ್ನ ಕನಸಾಗಿತ್ತು
ಕನಸಿನಲ್ಲಿ ಬಂದವಳು ಮನಸ್ಸಲ್ಲಿ ಕುಂತವಳು
ಒಂದೆರಡು ದಿನದ ಅತಿಥಿಯಾಗಿ ಹೊರಟೆ...
ಮರಳಿ ಬಾ ಎಂದು ಕರೆಯಲಾಗದಷ್ಟು ದೂರ