Tuesday, July 17, 2012

ಬಾಲ್ಯದ ಆ ದಿನಗಳ ನೆನಪು

ಬಾಲ್ಯದ ಆ ಖುಷಿಯಾದ ದಿನಗಳ ಮರೆಯಲು ಸಾಧ್ಯವೇ????

ನಮ್ಮ ಭವಿಷ್ಯದ ಚಿಂತೆಯಿಲ್ಲದೆ ಕಳೆದ ಆ ದಿನಗಳು. ರೋಡ್ ಮಧ್ಯದಲ್ಲೇ ಒಂದೆರಡು ಕಲ್ಲುಗಳ ಇಟ್ಟು ಆಡಿದ ಕ್ರಿಕೆಟ್. ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಆಡುತ್ತಿದ್ದ ಆಟಗಳು. ಮನೆ ಹತ್ತಿರದ ಹುಡುಗರ ಜೊತೆ ಆಡಿದ ಗಿಲ್ಲಿ ದಾಂಡು, ಗೋಲಿ, ಬುಗುರಿ ಆಟಗಳು. ಶಾಲೆಯಲ್ಲಿ ಟೀಚರಿಂದ ತಿಂದ ಆ ಏಟುಗಳು. ಶಾಲೆಯಲ್ಲಿ ಕ್ಲಾಸಿನ ಹೊರಗೆ ನಿಂತು ಮಾಡುತ್ತಿದ್ದ ಚೇಷ್ಟೆಗಳು, ಹುಟ್ಟಿದ ಹಬ್ಬದ ದಿನ ಕ್ಲಾಸಿನ ಎಲ್ಲ ಹುಡುಗ ಹುಡುಗಿಯರಿಗೂ ಕೊಡ್ತಾ ಇದ್ದ ಆ ೫೦ ಪೈಸೆ ಚಾಕಲೇಟ್ ಗಳು, ಬುಕ್ಕಿನ ಹಿಂದಿನ ಪುಟದಲ್ಲಿ ಬರೆಯುತ್ತಿದ್ದ ಆ ಕಾರ್ಟೂನ್ ಗಳು, ಅಪ್ಪ ಅಮ್ಮನ ಜೊತೆ ಓದದೆ ಇರೋದಕ್ಕೆ ಮಾಡುತ್ತಿದ್ದ ಕೋಳಿ ಜಗಳಗಳು, ಬುಧವಾರ ಒಂದೇ ದಿನ ಹಾಕುತ್ತಿದ್ದ ಆ ಕಲರ್ ಡ್ರೆಸ್ ಗಳು, ಅಕ್ಟೋಬರ್ ತಿಂಗಳಲ್ಲಿ ಬರುತ್ತಿದ್ದ ಚಳಿಗಾಲದ ರಜೆ, ಏಪ್ರಿಲ್ ಮೇ ತಿಂಗಳಿಗೆ ಕೊಡ್ತಾ ಇದ್ದ ಸಮ್ಮರ್ ಹಾಲಿಡೇಸ್, ಆ ರಜದಲ್ಲಿ ಮಾಡುತ್ತಿದ್ದ ಮಂಗಾಟಗಳು, ಅಜ್ಜಿ ಮಾಡಿ ಕೊಡ್ತಾ ಇದ್ದ ಸಿಹಿ ತಿಂಡಿಗಳು. ಅಜ್ಜಿ ಮನೆಗೆ ಹೋಗೋದೇ ಒಂದು ದೊಡ್ಡ ಸಂಭ್ರಮ ಆಗಿತ್ತು ಅಲ್ವ ನಮಗೆಲ್ಲರಿಗೂ.

ಸ್ನೇಹಿತರೊಂದಿಗೆ ಕೂತು ಮಾಡುತ್ತಿದ್ದ ಗ್ರೂಪ್ ಸ್ಟಡಿಗಳು, ಪರೀಕ್ಷೆ ಹಿಂದಿನ ದಿನದ ಭಯ, ಆ ಭಯದಿಂದ ಬಾರದ ನಿದ್ದೆಗಳು, ಪರೀಕ್ಷೆಯ ಟೈಮಲ್ಲಿ ಮಾಡುತ್ತಿದ್ದ ಕುಚೇಷ್ಟೆಗಳು, ಪಕ್ಕದವರು ಎಷ್ಟು ಬರಿತ ಇದ್ದಾರೆ ಅನ್ನೋ ಕುತೂಹಲಗಳು, ರಿಸಲ್ಟ್ ಬಂದಾಗ ಇಂಟರೆಸ್ಟ್ ಇಟ್ಕೊಂಡು ನೋಡ್ತಾ ಇದ್ದ ಎಲ್ಲರ ಮಾರ್ಕ್ಸ್ ಶೀಟುಗಳು. ವರ್ಷದಲ್ಲಿ ನೋಡುತ್ತಿದ್ದ ಒಂದೋ ಎರಡೋ ಮಕ್ಕಳ ಸಿನಿಮಾಗಳು, ದೂರದರ್ಶನದಲ್ಲಿ ಬರುತ್ತಿದ್ದ mickey mouse, ಚಿತ್ರಹಾರ್, ಚಿತ್ರಮಂಜರಿ ಹಾಗು ರಂಗೋಲಿ ಪ್ರೊಗ್ರಾಮ್ ಗಳು. ಇದ್ದಿದ್ದು ಒಂದೇ ಒಂದು ಚಾನೆಲ್ ಆದರು ನಾವು ಆರಾಮಾಗೆ ಇದ್ದಾಗಿತ್ತು. ಎಲ್ಲಿ ಹೋಯ್ತು ಆ ಮುಘ್ದತೆ?? ಆ ಸಂತೋಷ?? ಆ ದಿನಗಳು?? ಆ ಖುಷಿ??

 ಆ ದಿನಗಳು ಮತ್ತೆ ಮರಳಿ ಬರುವುದೇ ನಮಗೆ??? ಆ ದಿನಗಳಲ್ಲಿ ನಮ್ಮಲ್ಲಿದ್ದ ಮುಘ್ದತೆ ಆದರು ನಮಗೆ ತಿರುಗಿ ಬರುವುದೇ??? ಬೇಕೆಂದು ಎಷ್ಟೇ ಬೇಡಿದರು ನಮಗೆ ಆ ದಿನಗಳು ಮರಳಿ ಬರುವುದಿಲ್ಲ ಆ ದಿನಗಳೆಲ್ಲ ಕಳೆದು ಹೋಗಿದೆ ಎಂದು ಪರಿತಪಿಸುತ್ತಾ ಬಾಳಬೇಕಾಗಿದೆ ಅಲ್ವ ಮುಂದಿನ ದಿನಗಳನ್ನ??? ಮುಂದಿನ ದಿನದಲ್ಲಿ ಈ ರೀತಿಯ ಸಂತೋಷದ ದಿನಗಳಂತೂ ನಮಗೆ ತಿರುಗಿ ಬರುವುದಿಲ್ಲ ಅನ್ನೋದು ಒಂದು ಕಹಿ ಸತ್ಯ ಆದರು ಸಹ ಭವಿಷ್ಯ ಎಂಬ ಕತ್ತಲೆ ಪ್ರಪಂಚದಲ್ಲಿ ಖುಷಿ ಇರಲಿ ಅಥವ ದುಃಖ ಇರಲಿ ಏನೋ ಒಂದಂತು ಇದೆ ಎಂಬುದನ್ನ ಅರ್ಥೈಸಿಕೊಂಡು ನಮ್ಮ ಜೀವನ ನಡೆಸಬೇಕಾಗಿದೆ. ನಡೆಸುವ. Fast forward ಎಂಬ option ಇದ್ದಿದ್ರೆ ಚೆನ್ನಾಗಿರ್ತಿತ್ತು ಅಲ್ವ????

No comments:

Post a Comment