Tuesday, July 17, 2012

ಕನಸಿನ ಜೀವನ ಮನಸ್ಸಿಗೆ ಬಾಧೆ!!!

ಈ ದಿನ ನನಗೆ ಒಂದು ರೀತಿ ಒಳ್ಳೇದು ಆಗಿದೆ ಒಂದು ರೀತಿ ಕೆಟ್ಟದ್ದು ಆಗಿದೆ. ಒಳ್ಳೇದು ಹೇಗೆಂದರೆ ಬೆಳಗ್ಗೆ ಸುಮಾರು ೯ ಗಂಟೆ ಇಂದ ಸಂಜೆ ೭ ಗಂಟೆ ವರೆಗೆ ಬಿಡುವಿಲ್ಲದ ನಿದ್ರೆ... ಕೆಟ್ಟದಾಗಿರೋದು ಒಂದೇ ಒಂದು ಕಡೆ ನನ್ನ ನೈಟ್ ಶಿಫ್ಟ್ ಇಂದ. ಸಂಜೆ ಏಳುತ್ತಿದ್ದಂತೆಯೇ ಏನೋ ಒಂದು ರೀತಿಯ ಆಲಸ್ಯ. ಪ್ರತಿ ದಿನ ಇದ್ದ ಹಾಗೆ ಈ ದಿನ ಇಲ್ಲ. ಏನನ್ನೋ ಕಳೆದು ಕೊಂಡಿದ್ದೇನೆ ಅನ್ನೋ ಕಲ್ಪನೆ. ಮನಸ್ಸಿನಲ್ಲಿ ಒಂದು ರೀತಿಯ ದುಗುಡ.

ಬೆಳಗ್ಗೆ ಮಲಗಕ್ಕು ಮೊದಲು ಜ್ವರಕ್ಕೆ ಔಷಧಿ ತೆಗೆದುಕೊಂಡೇ ಮಲಗಿದ್ದೆ. ಹಾಗಾಗಿ ಸುಮಾರು ಹತ್ತು ತಾಸು ನಿದ್ದೆ ಮಾಡಿದ್ದೇನೆ ಇಂದು. ನಿನ್ನೆಯಿಂದ ಕಾಡುತ್ತಿದ್ದ ಜ್ವರ ಈಗಿಲ್ಲ. ಹಳೆಯ ಕಹಿಯಾದ ನೆನಪುಗಳು ಕಾಡುತ್ತಿಲ್ಲ. ಮುಂದೆ ನನ್ನ ಭವಿಷ್ಯದಲ್ಲಿ ಸಿಹಿಯಾದ ದಿನಗಳು ಬರಬಹುದೇನೋ ಎಂಬ ಆಸೆಯು ನನ್ನಲ್ಲಿ ಬರುತ್ತಾ ಇಲ್ಲ. ಮನಸ್ಸಿನಲ್ಲೇ ಒಂದು ರೀತಿಯ ಹೊಡೆದಾಟ. ನನ್ನ ಒಂದೇ ಒಂದು ಮನಸ್ಸೇ ಹಿಸೆ ತೆಗೆದುಕೊಂಡು ಬೇರೆಯಾದಂತಾಗಿದೆ. ನಿನ್ನೆಯ ಹಾಗೆ ಇವತ್ತಿಲ್ಲ ಗೊತ್ತಿದೆ, ನಾಳೆ ಹೇಗಿರತ್ತೆ ಅನ್ನೋ ಯೋಚನೇನು ನನಗಿಲ್ಲ, ಅದೂ ತಿಳಿದಿದೆ. ಆದರೂ ಯಾಕೆ ಈ ರೀತಿ ನನ್ನ ಮನಸ್ಸು ನನ್ನನ್ನೇ ಕಾಡುತ್ತಿದೆ.  ನಿದ್ದೆ ಜಾಸ್ತಿಯಾಗಿ ಹೀಗೆಲ್ಲ ಆಗ್ತಾ ಇದೆಯಾ ಅಥವಾ ಹಳೆಯದೆಲ್ಲ ಕಹಿಯಾದ ನೆನಪಾಗಿರುವುದರಿಂದನ ಅಥವಾ ನಾಳಿನ ಯೋಚನೆ ನಾ ಮಾಡದೆ ಇರುವುದರಿಂದನ??? ಕಾರಣವೇ ತಿಳಿಯದಾಗಿದೆ. ಮನಸ್ಸೇ ಹೀಗಾ?????

ಯಾರೋ ಪುಣ್ಯಾತ್ಮ ಹೇಳಿರೋದನ್ನ ಕೇಳಿದ್ದೆ "confusion is happiness" ಅಂತ. ಅದು ನಿಜನಾ??? ಕೆಟ್ಟದ್ದು ಒಳ್ಳೆಯದು, ಸಿಹಿ ಕಹಿ, ಗೊತ್ತಿರೋದು ಗೊತ್ತಿಲ್ದೆ ಇರೋದು ಇವೆಲ್ಲ ಹುಟ್ಟೋದು ಸಾಯೋದ್ರ ಮಧ್ಯೆ ಬೇಕಾ??? ಕನಸು ಕಟ್ಟುತ್ತಾ ಬದುಕಲು ನನಗೇಕೆ ಇಷ್ಟ ಆಗ್ತಾ ಇಲ್ಲ??? ಭವಿಷ್ಯ ಹೇಗಿರತ್ತೆ, ಹೇಗಿರಬೇಕು ಅನ್ನೋ ನಿರ್ಧಾರ ಇಂದಿಗೆ ನನ್ನಲ್ಲಿ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗ್ತಾ ಇಲ್ಲ??? ಎಲ್ಲ confusion; most probably ಇದೇ ನನ್ನ happiness ಅಲ್ಲವ????

ಇದನ್ನ ಓದಿ ನೀವು ಸಹ confuse ಆದ್ರ??? ಬರೆದು ತಿಳಿಸಿ ನಿಮ್ಮ ಅನಿಸಿಕೆಯನ್ನ

No comments:

Post a Comment